
ಚಳಿಗಾಲದಲ್ಲಿ ಹೆಚ್ಚು ಮೊಟ್ಟೆ ಸೇವನೆ ಮಾಡುವುದು ಒಳ್ಳೆಯದು ಯಾಕೆಂದರೆ…..?
ಸಮಯ ಬದಲಾದಂತೆ ಕೆಲವು ಆಹಾರ ಸೇವನೆ ಹಲವು ರೀತಿಯ ಪ್ರಯೋಜನೆ ನೀಡುತ್ತದೆ ಹಾಗೆಯೇ ಚಳಿಗಾಲದ ಸಮಯದಲ್ಲಿ ಮೊಟ್ಟೆ ಸೇವನೆ ಮಾಡುವುದು ಒಳ್ಳೆಯದು ಋತುವಿನ ಸಮಯದಲ್ಲಿ ಆರೋಗ್ಯವಾಗಿ ನಮಗೆ ಸಹಾಯ ಮಾಡುತ್ತದೆ. ಮೊಟ್ಟೆ ಸೇವನೆ ಮಾಡುವುದರಿಂದ ಚಳಿಗಾಲದಲ್ಲಿ ಮೈ ಕೈ ಒಡೆದುಕೊಳ್ಳುವುದು ಕಡಿಮೆ ಮಾಡಲೂ ಸಹಕಾರಿಯಾಗಿದೆ ಮೊಟ್ಟೆಯು 9 ಅಮೈನೋ ಆಮ್ಲವನ್ನು ಹೊಂದಿದೆ ನಮ್ಮ ದೇಹಕ್ಕೆ ವಿಟಮಿನ್ ಡಿ ಯನ್ನು ಸಹ ಒದಗಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನೂ ಸಹ ನಾವು ಪಡೆಯಬಹುದು. ಮೊಟ್ಟೆಯು ನೈಸರ್ಗಿಕ ಆಹಾರವಾಗಿದೆ. ಚಳಿಗಾಲದಲ್ಲಿ ಶಕ್ತಿಯ ಮಟ್ಟ ಹಾಗೂ ದೈಹಿಕ ಶಕ್ತಿಯನ್ನು ಕಾಪಾಡಿಕೊಳ್ಳಬಹುದು. ಒಂದು ಮೊಟ್ಟೆಯಯಲ್ಲಿ 6 ಗ್ರಾಂ ನಷ್ಟು ಪ್ರೋಟೀನ್ ಹೊಂದಿರುತ್ತದೆ. ಮೊಟ್ಟೆ ಸೇವನೆಯಿಂದ ಹಲವು ಸೋಂಕುಗಳನ್ನು ತಡೆಯಬಹುದು.

ಉತ್ತಮ ಗುಣಮಟ್ಟದ ಪ್ರೊಟೀನ್: ಮೊಟ್ಟೆಯಲ್ಲಿ ಉತ್ತಮ ಗುಣಮಟ್ಟದ ಪ್ರೊಟೀನ್ ಇರುತ್ತದೆ, ಇದು ಸ್ನಾಯುಗಳ ಬೆಳವಣಿಗೆ ಮತ್ತು ರಿಪೇರಿಗೆ ಬಹಳ ಸಹಕಾರಿ.
ಮೆದುಳಿನ ಆರೋಗ್ಯ: ಇದರಲ್ಲಿರುವ ಕೋಲಿನ್ (Choline) ಎಂಬ ಪೋಷಕಾಂಶವು ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ಜ್ಞಾಪಕಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಕಣ್ಣಿನ ರಕ್ಷಣೆ: ಮೊಟ್ಟೆಯ ಹಳದಿ ಭಾಗದಲ್ಲಿ ಲ್ಯೂಟಿನ್ ಮತ್ತು ಝೀಕ್ಸಾಂಥಿನ್ ಎಂಬ ಆಂಟಿ-ಆಕ್ಸಿಡೆಂಟ್ಗಳಿವೆ, ಇವು ಕಣ್ಣಿನ ಪೊರೆ ಮತ್ತು ದೃಷ್ಟಿ ದೋಷಗಳನ್ನು ತಡೆಯುತ್ತವೆ.
ತೂಕ ನಿರ್ವಹಣೆ: ಮೊಟ್ಟೆ ತಿಂದರೆ ಹೊಟ್ಟೆ ತುಂಬಿದ ಅನುಭವವಾಗುವುದರಿಂದ, ಇದು ಅನಗತ್ಯ ಹಸಿವನ್ನು ಕಡಿಮೆ ಮಾಡಿ ತೂಕ ಇಳಿಸಲು ಸಹಾಯ ಮಾಡುತ್ತದೆ.
ಹೃದಯದ ಆರೋಗ್ಯ: ಮೊಟ್ಟೆಯು ‘ಒಳ್ಳೆಯ ಕೊಲೆಸ್ಟ್ರಾಲ್’ (HDL) ಮಟ್ಟವನ್ನು ಹೆಚ್ಚಿಸಲು ಸಹಕರಿಸುತ್ತದೆ.
