Good luck to these 3 zodiac signs after the Holi full moon,ಹೋಳಿ ಹುಣ್ಣಿಮೆ ಮುಗಿದ ನಂತರ  ಈ 3 ರಾಶಿಯವರಿಗೆ ಅದೃಷ್ಟ, ಕೆಲಸದಲ್ಲಿ ಯಶಸ್ಸು ಜೊತೆಗೆ ದುಡ್ಡಿನ ಸುರಿ ಮಳೆ

Share to Your Friends

ಬಣ್ಣಗಳ ಹಬ್ಬ ಬಂದೇ ಬಿಡ್ತು. ಮಾರ್ಚ್ 14 ರಂದು ಎಲ್ಲಾ ಕಡೆ ಹೋಳಿ ಹಬ್ಬದ ಸಂಭ್ರಮ ಸಡಗರ ಆಚರಿಸಲಾಗುತ್ತೆ. ಹೋಳಿ ನಂತರ ಶುಕ್ರನು ತನ್ನ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುತ್ತವೆ,. ಶುಕ್ರನು ಸಮೃದ್ಧಿಗೆ ಕಾರಣನಾಗಿದ್ದಾನೆ.  ಶುಕ್ರನು ಫೆಬ್ರವರಿಯಲ್ಲಿ ಮಾತ್ರ ಚಿಹ್ನೆಯಲ್ಲಿ ಬದಲಾವಣೆ ಮಾಡಿದ್ದಾನೆ. ಶುಕ್ರನು ಪ್ರಸ್ತುತ ಮೀನ ರಾಶಿಯಲ್ಲಿದ್ದಾನೆ. ಮೀನ ರಾಶಿಯಲ್ಲಿ ಶುಕ್ರನ ಉಪಸ್ಥಿತಿಯು ಮಾಳವ್ಯ ರಾಜಯೋಗಕ್ಕೆ ಕಾರಣವಾಗುತ್ತೆ. ಶುಕ್ರ ಈಗಾಗಲೇ ಅನೇಕ ರಾಶಿಚಕ್ರ ಚಿಹ್ನೆಗಳಿಗೆ ಅನುಗ್ರಹವನ್ನು ನೀಡುತ್ತಿದ್ದಾನೆ. ಹೋಳಿ ಹಬ್ಬದ ನಂತರ ಅಂದರೆ ಮಾರ್ಚ್ 23 ರಂದು ಶುಕ್ರ ಉದಯಿಸುತ್ತಾನೆ. ಈ ಪ್ರಭಾವವು ಯಾವ ರಾಶಿಗಳ ಮೇಲೆ ಇರುತ್ತದೆ ಎಂದು ನೋಡೋಣ.

ಮಾಳವೀಯ ರಾಜಯೋಗ ಯಾವಾಗ?


ಕುಂಡಲಿಯಲ್ಲಿ ಮಾಳವ್ಯ ರಾಜಯೋಗವನ್ನು ರಚಿಸಿದರೆ, ವ್ಯಕ್ತಿಯು ಯಶಸ್ವಿಯಾಗುತ್ತಾನೆ ಮತ್ತು ಅನೇಕ ವಾಹನಗಳ ಮಾಲೀಕರು ಐಷಾರಾಮಿ ಮತ್ತು ಸಂತೋಷದ ಜೀವನವನ್ನು ನಡೆಸುತ್ತಾರೆ.

ಶುಕ್ರನು ಮೊದಲ

ಶುಕ್ರನು ಮೊದಲ, 4ನೇ, 7ನೇ ಹಾಗೂ 10ನೇ ಪಾದಗಳಲ್ಲಿ ಅಥವಾ ಮೀನ ರಾಶಿಯಲ್ಲಿದ್ದಾಗ ಮಾಳವ್ಯ ರಾಜಯೋಗವು ಸಂಭವಿಸುತ್ತೆ, ಇದು ತನ್ನದೇ ಆದ ರಾಶಿಗಳಾದ ವೃಷಭ, ತುಲಾ ಹಾಗು ಗುರುವಿನ ಚಿಹ್ನೆಯಾಗಿದೆ. ಈ ಅದೃಷ್ಟವನ್ನು ಹೊಂದಿರುವವರು ತಮ್ಮ ಜೀವನದಲ್ಲಿ ಐಷಾರಾಮಿ ಜೀವನ ಮತ್ತು ಸಂತೋಷವನ್ನು ಪಡೆಯುತ್ತಾರೆ. ಇವರ ವ್ಯಕ್ತಿತ್ವ ಉತ್ತಮವಾಗಿರುತ್ತದೆ.  ಜೊತೆಗೆ ಪ್ರಸಿದ್ಧರಾಗುತ್ತಾರೆ. ಯಶಸ್ಸನ್ನು ಸಾಧಿಸುತ್ತಾರೆ.

ಈ 3 ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟ

1. ಮಿಥುನ ರಾಶಿ
ಶುಕ್ರನಿಂದ ಉಂಟಾಗುವ ಮಾಳವ್ಯ ರಾಜಯೋಗವು ಶುರು ಜೀವನದಲ್ಲಿ ಹೊಸ ಎತ್ತರವನ್ನು ತಲುಪುತ್ತಿರ. ಮಾಡುವ ಪ್ರತಿ ಕೆಲಸದಲ್ಲೂ ಯಶಸ್ಸು ಪಡೆಯುತ್ತಿರ. ವ್ಯವಹಾರದಲ್ಲಿ ಸಾಕಷ್ಟು ಲಾಭ ಇರುತ್ತದೆ. ಉದ್ಯಮಿಗಳು ತಮ್ಮ ವ್ಯವಹಾರವನ್ನು ವಿಸ್ತರಿಸಿಕೊಳ್ಳುತ್ತಾರೆ. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. ಸಾಲಗಳು ಕಡಿಮೆಯಾಗುತ್ತವೆ.

2. ವೃಶ್ಚಿಕ ರಾಶಿ
ಹೋಳಿ ಹುಣ್ಣಿಮೆಯ ನಂತರ ಶುಕ್ರನ ಉದಯವು ವೃಶ್ಚಿಕ ರಾಶಿಯವರಿಗೆ ರಾಜಯೋಗವನ್ನು ತರುತ್ತದೆ. ವ್ಯವಹಾರದಲ್ಲಿ ಹೆಚ್ಚು ಲಾಭ ಗಳಸ್ತಿರ. ಪ್ರೀತಿಯ ಜೀವನವು ಉತ್ತಮವಾಗಿರುತ್ತದೆ.  ಅಂದುಕೊಂಡ ಕೆಲಸಗಳು ಪೂರ್ಣಗೊಳ್ಳುತ್ತದೆ. ಸಂಪತ್ತು ಹೆಚ್ಚಾಗುತ್ತದೆ. ಸಂತೋಷದ ದಿನಗಳನ್ನು ಕಳೆಯುತ್ತೀರಿ. ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ.

3. ಮಕರ ರಾಶಿ
ಕೆಲಸದಲ್ಲಿ ಹೆಚ್ಚು ಲಾಭ ಪಡೆಯುತ್ತೀರಿ. ಶುಕ್ರ ನಿಮಗೆ ಐಷಾರಾಮಿ ಜೀವನವನ್ನು ಕೊಡುತ್ತಾನೆ. ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಈ ಹಿಂದೆ ಸಾಧಿಸಲು ಸಾಧ್ಯವಾಗದ ಕೆಲಸ ಈಗ ಯಶಸ್ಸನ್ನು ಪಡೆಯುತ್ತೀರಿ. ಆದಾಯದ ಮೂಲಗಳು ಹೆಚ್ಚಾಗುತ್ತವೆ. ಸ್ನೇಹಿತರು ನಿಮಗೆ ಬೆಂಬಲವಾಗಿ ನಿಲ್ಲುತ್ತಾರೆ. ಆರೋಗ್ಯದ ಕಡೆಗೆ ಗಮನ ಕೊಡುತ್ತೀರಿ.

Leave a Reply

Your email address will not be published. Required fields are marked *