ಚಾಣಕ್ಯ ಅವರ ಮಾತು ನಿಮ್ಮಲ್ಲಿ ಇಂತಹ ಕೆಟ್ಟ ಅಭ್ಯಾಸಗಳು ಇದ್ದರೆ ಯಶಸ್ಸನ್ನು ಸಾಧಿಸಲು ಅಗೊದಿಲ್ಲ?

ಚಾಣಕ್ಯರು ಯಾವ ವ್ಯಕ್ತಿಯಲ್ಲಿ ಈ ಕೆಟ್ಟ ಅಭ್ಯಾಸಗಳು ಇರುತ್ತವೆ ಅವನು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಚಾಣಕ್ಯರು ಹೇಳಿರುವ, ಆ ಕೆಟ್ಟ ಅಭ್ಯಾಸಗಳು ಯಾವುವು ಗೊತ್ತಾ?

ಚಾಣಕ್ಯರು ಅವರ ನೀತಿಯಲ್ಲಿ ಯಶಸ್ವಿ ಜೀವನ ನಡೆಸಲು ಕಠಿಣ ಪರಿಶ್ರಮ ಸಮರ್ಪಣೆ ಬಹು ಮುಖ್ಯ. ಅದರಿಂದ ನಕಾರಾತ್ಮಕ ವಿಷಯಗಳಿಂದ ಕೂಡ ದೂರವಿರಬೇಕು ಎಂದಿದ್ದಾರೆ. ನಕಾರಾತ್ಮಕ ವಿಷಯಗಳು ಬಗ್ಗೆ ಯಾವಾಗಲು ನಮ್ಮ ಯಶಸ್ಸಿಗೆ ಮಾರಕವಾಗಿರುತ್ತದೆ. ಇಂತಹ ವಿಚಾರ ನಮ್ಮನ್ನು ಗುರಿ ಸಾಧಿಸದಂತೆ ಮಾಡಬಹುದು. ಯಶಸ್ಸನ್ನು ಸಾಧಿಸಲು ಇರುವ ಏಕೈಕ ಮಾರ್ಗ ಆದರೆ ಕಠಿಣ ಪರಿಶ್ರಮವಾಗಿದೆ. ಕೆಲವು ಸಲ ಕಠಿಣ ಪರಿಶ್ರಮದಿಂದ ನಮಗೆ ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ನಮ್ಮ ಯಶಸ್ಸನ್ನು ತಡೆಯಲು ನಮ್ಮಲ್ಲಿನ ಕೆಲವೊಂದು ಅಭ್ಯಾಸಗಳು ಮುಖ್ಯ ಕಾರಣವಾಗುತ್ತದೆ. ನಮ್ಮ ಯಾವೆಲ್ಲಾ ಅಭ್ಯಾಸಗಳು ನಮಗೆ ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ನಮಗೆ ಅರ್ಥವಾಗಬೇಕು.?

ಸೋಮಾರಿತನ
ಪ್ರತಿ ವ್ಯಕ್ತಿಯಲ್ಲಿನ ಸೋಮಾರಿತನ ಜೀವನದಲ್ಲಿ ಮುಂದೆ ಸಾಗದಂತೆ ತಡೆಯುತ್ತದೆ. ಅದರಿಂದ ನೀವು ಗುರಿಗಳನ್ನು ಸಾಧಿಸುವಲ್ಲಿ ವಿಳಂಬವನ್ನು ಎದುರಿಸುತ್ತೀರಿ. ಚಿಕ್ಕ ಪುಟ್ಟ ಗುರಿಗಳು ನಿಮ್ಮ ಅಳವಡಿಸಿಕೂಳ್ಳಿ. ಮತ್ತು ಗುರಿಗಳನ್ನು ಸಾಧಿಸಲು ನೀವು ಪ್ರೇರೇಪಿಸಿಕೊಳ್ಳಿ. ಗುರಿಗಳನ್ನು ಸಾಧಿಸುವ ಛಲ, ಬಲವಿದ್ದರೆ ಸಾಲದು. ಸಾಧಿಸುವುದು ಹೇಗೆ ಎಂಬುದು ತಿಳಿದುಕೊಳಬೇಕು. ದಿನ ಯೋಗ ಧ್ಯಾನ ಮಾಡಿ ಮತ್ತು ಆರೋಗ್ಯಕರ ಜೀವನಶೈಲಿ ಅಲಿ ಅಳವಡಿಸಿಕೊಳ್ಳಿ.
ಕೋಪ

ಕೆಲವು ಜನರ ಕೋಪವು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ನಮ್ಮ ಸಂಬಂಧಗಳ ಬಾಂಧವ್ಯ ಹದಗೆಡುವಂತೆ ಮಾಡುತ್ತದೆ. ಒಂದು ವೇಳೆ ನಿಮ್ಮ ಕೋಪ ಬರುತ್ತಿದ್ದರೆ ಅಂತಹ ಸಂದರ್ಭದಲ್ಲಿ ನೀವು ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳಿ. ನಂತರ ಧ್ಯಾನ ಮಾಡಿ ಮತ್ತು ನಿಮ್ಮ ಮನಸ್ಸನ್ನು ಶಾಂತಗೊಳಿಸುವ ಯಾವುದು ಒಂದು ವಿಚಾರದ ಮೇಲೆ ಗಮನ ಕೊಡಿ.
ಅಭದ್ರತೆ

ಅಭದ್ರತೆಯು ಜನರನ್ನು ಹೊಸ ಅವಕಾಶಗಳನ್ನು ತೆಗೆದುಕೊಳ್ಳದಂತೆ ಮಾಡುತ್ತದೆ ಮತ್ತು ಬೇರೆ ಅವರೊಂದಿಗೆ ತಮ್ಮ ಹೋಲಿಸಲು ಜನರು ಪ್ರೇರೇಪಿಸುತ್ತದೆ. ಆದ್ದರಿಂದ ನಿಮ್ಮ ಸಾಮರ್ಥ್ಯಗಳನ್ನು ನಂಬಿಕೆ ಮತ್ತು ನಿಮ್ಮ ದೌರ್ಬಲ್ಯಗಳನ್ನು ಸ್ವೀಕರಿಸಿ. ನಿಮ್ಮನ್ನು ಬೇರೆ ಅವರೊಂದಿಗೆ ಹೋಲಿಸುವುದನ್ನು ಬಿಡಿ. ಇತರರೊಂದಿಗೆ ನಿಮ್ಮನ್ನು ನೀವು ಹೋಲಿಸಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ನೀವು ದೃಢವಾಗಿ ಇರಬೇಕು
ದುರಾಸೆ

ದುರಾಸೆಯಂತಹ ಗುಣವು ಸಾಮಾನ್ಯವಾಗಿ ಜನರನ್ನು ತಪ್ಪು ದಾರಿಗೆ ಕೊಂಡೊಯ್ಯುತ್ತದೆ ದುರಾಸೆ ಜನರ ನಡುವಿನ ಸಂಬಂಧಗಳನ್ನು ಹಾಳು ಮಾಡುತ್ತದೆ. ಹಾಗೆ ದುರಾಸೆ ದುಃಖಕ್ಕೆ ಕಾರಣ ಆಗುತ್ತದೆ. ಆದ್ದರಿಂದ ಸಂತೃಪ್ತರಾಗಿರಲು ಕಲಿಯಿರಿ. ಹಣವನ್ನು ಒಂದು ಸಾಧನವಾಗಿ ನೋಡಿ, ಅಂತ್ಯವಾಗಿ ಪರಿಗಣಿಸದಿರಿ. ದುರಾಸೆಯಿಂದ ನೀವು ದೂರಇರಿ ಅತಿಯಾದೆ ಆಸೆಯು ನಿಮಗೆ ಒಳ್ಳೆಯ ಯಶಸ್ಸ ಸಾಧಿಸಲು ಅವಕಾಶ ಮಾಡಿಕೊಡುವುದಿಲ್ಲ.
ನಕಾರಾತ್ಮಕ ಚಿಂತನೆ

ನಕಾರಾತ್ಮಕ ಚಿಂತನೆಯು ಆತ್ಮ ವಿಶ್ವಾಸವನ್ನು ಕಡಿಮೆ ಮಾಡುತ್ತದೆ ಮತ್ತು ಯಶಸ್ಸಿನ ಹಾದಿಯಲ್ಲಿ ಬರುವ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತೆ. ಆದ್ದರಿಂದ ಯಾವಾಗಲೂ ಧನಾತ್ಮಕವಾಗಿ ಚಿಂತಿಸಲು ಅಥವಾ ಯೋಚಿಸಲು ಪ್ರಯತ್ನಿಸಿ ಮತ್ತು ಸ್ಫೂರ್ತಿದಾಯಕ ಪುಸ್ತಕಗಳನ್ನು ಓದಿ ಮತ್ತು ಸಕಾರಾತ್ಮಕ ಜನರೊಂದಿಗೆ ನಿಮ್ಮ ಸಮಯವನ್ನು ಕಳೆಯಿರಿ ಎಂದು ಚಾಣಕ್ಯರು ಹೇಳಿದ್ದಾರೆ.
ಅಹಂಕಾರ

ನಮ್ಮಲ್ಲಿ ಇರುವ ಅಹಂಕಾರವು ಇತರ ಜನರೊಂದಿಗೆ ಸೇರಲು ನಮ್ಮನ್ನು ಬಿಡುವುದಿಲ್ಲ. ಇತರರ ಸಹವಾಸ ಮಾಡುವುದಕ್ಕೂ ಅದು ನಮಗೆ ಅನುವು ಮಾಡಿಕೊಡುವುದಿಲ್ಲ. ಅಹಂಕಾರವು ನಾವು ಇತರರಿಂದ ಕಲಿಯಬೇಕಾದ ಅವಕಾಶಗಳನ್ನು ದೂರ ಮಾಡಿ ಬಿಡುತ್ತದೆ. ಆದ್ದರಿಂದ, ಜೀವನದಲ್ಲಿ ಯಾವಾಗಲೂ ಸಭ್ಯರಾಗಿರಿ ಮತ್ತು ಇತರರ ಅಭಿಪ್ರಾಯಗಳನ್ನು ಗೌರವಿಸಿ. ಅಹಂಕಾರವನ್ನು ಬಿಟ್ಟು ಯಾವಾಗಲೂ ನಿಮ್ಮ ಯಶಸ್ಸಿಗೆ ಯಾವುದು ಪೂರಕವೋ ಅದರ ಬಗ್ಗೆ ಮಾತ್ರ ಯೋಚಿಸಿ ಎಂದು
