
ಕೂದಲಿನ ಬೆಳವಣಿಗೆಗೆ ಯಾವಾಗಲೂ ಎಣ್ಣೆ ಬಳಸಬೇಕಾಗಿಲ್ಲ, ಆದರೆ ನಿಮ್ಮ ಬೆರಳ ತುದಿಯಿಂದ ಪ್ರತಿದಿನ ನೆತ್ತಿಯ ಮಸಾಜ್ ಮಾಡುವುದರಿಂದ ಕೂದಲು ಉದುರುವುದನ್ನು ತಡೆಯಬಹುದು.

ಕೂದಲಿನ ದಪ್ಪವನ್ನು ಸುಧಾರಿಸಬಹುದು ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಬಹುದು.ನಿಮ್ಮ ಕೂದಲು ದಟ್ಟವಾಗಿ, ಆರೋಗ್ಯವಾಗಿ ಬೆಳೆಯಲು ನೆತ್ತಿಯ ಮಸಾಜ್ ಅತ್ಯುತ್ತಮ ಮಾರ್ಗ.

ಇದು ರಕ್ತ ಸಂಚಾರವನ್ನು ಹೆಚ್ಚಿಸಿ, ಕೂದಲ ಬುಡವನ್ನು ಬಲಪಡಿಸುತ್ತದೆ. ಪ್ರತಿದಿನ ಕೆಲವು ನಿಮಿಷಗಳ ಕಾಲ ಮಸಾಜ್ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು. ಹೀಗಾಗಿ ನೀವು ಕೂಡ ನಿಮ್ಮ ಕೂದಲು ಚೆನ್ನಾಗಿ ಬೆಳೆಯಲು ಮಾರ್ಗವಾಗಿದೆ.
