Lucky Dreams ಈ ಕನಸುಗಳನ್ನು ಯಾರಿಗು ಹೇಳದೆ ಇದ್ರೆ ಮಾತ್ರ ಅದೃಷ್ಟ, ಶ್ರೀಮಂತಿಕೆ ಸಿಗುತ್ತೆ.!

Share to Your Friends



ನಮಗೆ ಬಿಳುವ ಒಂದೊಂದು ಕನಸಿಗೂ ಒಂದೊಂದು ಕಾರಣವಿರುತ್ತದೆ . ಆದರೆ ಆ ಕನಸುಗಳನ್ನು ಯಾರಿಗೂ ಹೇಳಬಾರದು. ಯಾವ ಕನಸು ಬಿದ್ದರೆ ಅದೃಷ್ಟ, ಮತ್ತು ಶ್ರೀಮಂತಿಕೆ ಬರುತ್ತೆ.? ನಮ್ಮ ಯಾವ ಕನಸನ್ನು ನಾವು ರಹಸ್ಯವಾಗಿಡಬೇಕು ಎಂಬುದನ್ನು ತಿಳಿಯೋಣ .


ನಮಗೆ ಕನಸುಗಳು ಬಿದ್ದಾಗ ಅದನ್ನು ನಾವು ಮೊದಲು ಬೆರೆಯವರೊಂದಿಗೆ ಹೇಳಿಕೊಳ್ಳಲು ಬಯಸುತ್ತೇವೆ. ಕೆಲವೊಮ್ಮೆ ಆತಂಕದಿಂದ ಹೇಳಿಕೊಂಡರೆ, ಇನ್ನು ಕೆಲವೊಮ್ಮೆ ಸಂತೋಷದಿಂದ ಹಂಚಿಕೊಳ್ಳುತ್ತೇವೆ. ಇಲ್ಲಿ ನಾವು ಹೇಳುತ್ತಿರುವ ಕನಸುಗಳ ಬಗ್ಗೆ ನೀವು ಯಾರಿಗೂ ಹೇಳಬಾರದು. ಯಾರೊಂದಿಗೂ ಹಂಚಿಕೊಳ್ಳಬಾರದು. ಇಂತಹ ಕನಸುಗಳನ್ನು ನೀವು ರಹಸ್ಯವಾಗಿಡಬೇಕು. ಈ ಕನಸುಗಳು ಅದೃಷ್ಟ, ಧನಾಗಮನ, ಸಂಪತ್ತನ್ನು ಸೂಚಿಸುವಂತಹ ಕನಸುಗಳು. ಇಂತಹ ಕನಸುಗಳ ಬಗ್ಗೆ ಇತರರಲ್ಲಿ ಹೇಳಿಕೊಂಡರೆ ಆ ಕನಸು ನನಸಾಗದೆ ಹಾಗೇ ಉಳಿದುಬಿಡುತ್ತದೆ.

ಕನಸಿನಲ್ಲಿ ನೀವು ದೇವರನ್ನು ನೋಡಿದಾಗ



ಕನಸಿನಲ್ಲಿ ನೀವು ದೇವರನ್ನು ನೋಡಿದಾಗ ಅಂತಹ ಕನಸುಗಳ ಬಗ್ಗೆ ಯಾರ ಬಳಿಯೂ ಹೇಳಬಾರದು. ಈ ಕನಸನ್ನು ನೀವು ರಹಸ್ಯವಾಗಿ ಇಟ್ಟುಕೊಂಡಿರಬೇಕು. ಇಂತಹ ಕನಸುಗಳನ್ನು ನೀವು ನಿಮ್ಮ ಸ್ನೇಹಿತರೊಂದಿಗೆ ಅಥವಾ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳುವುದರಿಂದ ಅದು ನಿಮಗೆ  ಫಲವನ್ನು ನೀಡುವುದಿಲ್ಲ .ಯಾವ ವ್ಯಕ್ತಿಯ ಮನಸ್ಸು ನಿಷ್ಕಲ್ಮಷವಾಗಿರುತ್ತದೆಯೋ, ಯಾರು ದೇವರಿಗೆ ಹೆಚ್ಚು ಪ್ರಿಯವಾಗಿರುತ್ತಾರೋ ಅಂತವರ ಕನಸಿನಲ್ಲಿ ಮಾತ್ರ ದೇವರು ಕಾಣಿಸಿಕೊಳ್ಳುತ್ತಾನೆ. ಹಾಗೆಯೆ ಎಲ್ಲರಿಗೂ ದೇವರ ಕನಸು ಬೀಳಲು ಸಾಧ್ಯವಿಲ್ಲ. ಈ ಕನಸು ಆದಷ್ಟು ಬೇಗ ನೀವು ಶ್ರೀಮಂತರಾಗುವ ಸಂಕೇತ ಆಗಿರುತ್ತದೆ.

ಯಾವುದಾದರೂ ವ್ಯಕ್ತಿ ತನ್ನ ಕನಸಿನಲ್ಲಿ ತೀರ್ಥ ಸ್ಥಳಗಳನ್ನು ನೋಡಿದರೆ


ಯಾವುದಾದರೂ ವ್ಯಕ್ತಿ ತನ್ನ ಕನಸಿನಲ್ಲಿ ತೀರ್ಥ ಸ್ಥಳಗಳನ್ನು ನೋಡಿದರೆ ಅದು ಆತನ ಮನಸ್ಸಿಗೆ ಸಂತೋಷವನ್ನು ನೀಡುತ್ತದೆ. ಅದೇ ಖುಷಿಯಲ್ಲಿ ಅವರು ತಮ್ಮ ಕನಸಿನ ವಿಚಾರವನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ಯಾವುದೇ ಕಾರಣಕ್ಕು ಈ  ತಪ್ಪನ್ನು ಮಾಡಲು ಹೋಗಬೇಡಿ. ಯಾವ ವ್ಯಕ್ತಿಯಲ್ಲಿ ಸಕಾರಾತ್ಮಕ ಶಕ್ತಿಗಳು, ಸಕಾರಾತ್ಮಕ ಆಲೋಚನೆಗಳು ತುಂಬಿಕೊಂಡಿರುತ್ತೇವೆಯೋ ಆಗ ಮಾತ್ರ ತೀರ್ಥಸ್ಥಳಗಳು ಕನಸಿನಲ್ಲಿ ಕಾಣಿಸಿಕೊಳ್ಳುತ್ತವೆ. ನಿಮ್ಮ ಮನಸ್ಸಿನಲ್ಲಿ ಆಸೆಗಳು ಶೀಘ್ರದಲ್ಲೇ ಈಡೇರುವುದು ಎಂಬುದರ ಸಂಕೇತ ಆಗಿರುತ್ತದೆ.



ನಿಮ್ಮ ಕನಸಿನಲ್ಲಿ ಅರಳಿದ ಹೂದೋಟ, ಹಸಿರಾದ ಕಾಡು, ಫಲಬಿಟ್ಟಿರುವ ಮರ ಇತ್ಯಾದಿ ವಸ್ತುಗಳನ್ನು ನೋಡಿದರೂ ಅದರ ಬಗ್ಗೆ ಯಾರಿಗೂ ಹೇಳಬಾರದು. ಇಂತಹ ಕನಸುಗಳು ನಿಮ್ಮ ವ್ಯಾಪಾರ, ವ್ಯವಹಾರ ಮತ್ತು ಉದ್ಯೋಗದಲ್ಲಿ ವೃದ್ಧಿಯಾಗಲಿದೆ ಎಂಬುದನ್ನು ಈ ಕನಸುಗಳು ಸೂಚಿಸುತ್ತದೆ. ಹಾಗೆಯೆ ಕನಸಿನಲ್ಲಿ ಕಮಲದ ಹೂವನ್ನು ನೋಡಿದರೆ ನಿಮ್ಮ ಅನಾರೋಗ್ಯ ದೂರ ಆಗಿ  ಆರೋಗ್ಯವಾಗಿ ಇರುತೀರಿ.

ಹರಿಯುತ್ತಿರುವ ನದಿಯ ಕನಸು ಬಿದ್ದರೆ


ಹರಿಯುತ್ತಿರುವ ನದಿಯ ಕನಸು ಬಿದ್ದರೆ ನೀವು ಖುಷಿಪಡಬೇಕು. ಯಾಕೆಂದರೆ ಈ ಕನಸನ್ನು ಅತ್ಯಂತ ಒಳ್ಳೆಯ ಕನಸು ಎಂದು ಕರೆಯಲಾಗುತ್ತದೆ. ಈ ಕನಸಿನಿಂದ ನಿಮ್ಮ ಪಾಪಗಳು ನಾಶವಾಗುತ್ತದೆ. ಹಾಗೆಯೇ ಯಾರಾದರೂ ನಿಮಗೆ ನೀರನ್ನು ಕುಡಿಸುತ್ತಿದ್ದಂತೆ ಕನಸು ಬಿದ್ದರೆ ನಿಮ್ಮ ಜೀವನದಲ್ಲಿನ ನೀವು ಯಶಸ್ಸನ್ನು ಸಾಧಿಸುತ್ತೀರಿ ಎಂದರ್ಥ.

ಯಾವ ವ್ಯಕ್ತಿ ತನ್ನ ಕನಸಿನಲ್ಲಿ ಲಕ್ಷ್ಮಿ ದೇವಿಯನ್ನು ನೋಡುತ್ತಾನೋ



ಯಾವ ವ್ಯಕ್ತಿ ತನ್ನ ಕನಸಿನಲ್ಲಿ ಲಕ್ಷ್ಮಿ ದೇವಿಯನ್ನು ನೋಡುತ್ತಾನೋ ಅವನಿಗೆ ಆದಷ್ಟು ಬೇಗ ಅದೃಷ್ಟ ಒಲಿದು ಬರುಲಿದೆ ಎಂದರ್ಥ. ಅವರ ಜೀವನದಲ್ಲಿ ಆದಷ್ಟು ಬೇಗ ಧನ – ಸಂಪತ್ತಿನ ಆಗಮನವಾಗಲಿದೆ ಎಂಬುದನ್ನು ಸೂಚಿಸುತ್ತದೆ. ಆದರೆ ಈ ಕನಸನ್ನು ಯಾರಿಗೂ ಹೇಳಬೇಡಿ. ಹೇಳಿದರೆ ನಿಮ್ಮ ಕೆಟ್ಟ ದಿನಗಳು ಪ್ರಾರಂಭವಾಗುವುದು. ಕನಸಿನಲ್ಲಿ ದೇವತೆಯ ದರ್ಶನವಾದರೆ ನಿಮ್ಮೆಲ್ಲಾ ಸಂಕಷ್ಟಗಳು ದೂರಾಗುತ್ತದೆ‌ ಎಂಬುದರ ಸಂಕೇತ ಆಗಿರುತ್ತದೆ.

Leave a Reply

Your email address will not be published. Required fields are marked *