
ಪ್ರಸ್ತುತ ಈಗ ಪುಟ್ಟ ಮಕ್ಕಳಿಂದ ದೊಡ್ಡವರ ತನಕ ಮೊಬೈಲ್ ಅನ್ನುವುದು ಒಂದು ಚಟವಾಗಿದೆ.
ನಿಂತರೂ, ಕೂತರೂ ಮೊಬೈಲ್ ಬೇಕೇ ಬೇಕು ಅಷ್ಟೋಂದು ಅನಿವಾರ್ಯ ಆಗಿದೆ.
ಪುಟ್ಟ ಮಕ್ಕಳಿಗೆ ಊಟ ಮಾಡಬೇಕಾದರೆ ಮೊಬೈಲ್ ಬೇಕು, ಮಲಗಬೇಕಾದರೂ ಮೊಬೈಲ್ ಬೇಕು. ಕೆಲವೊಮ್ಮೆ ತಂದೆ ತಾಯಿಯರು ಅವರ ಕೆಲಸ ಸುಲಭವಾಗುತ್ತದೆ ಅಂತ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಬಿಡುತ್ತಾರೆ. ಇದು ಮುಂದಿನ ದಿನಗಳಲ್ಲಿ ಈ ಚಟದಿಂದ ಹೊರ ಬರುವುದು ತುಂಬಾ ಕಷ್ಟ ಆಗುತ್ತದೆ.

ಇದಿಷ್ಟು ಮಕ್ಕಳ ವಿಷಯ ಆದರೇ ಇನ್ನು ಹಿರಿಯರು ಯುವಕ ಯುವತಿಯರು ಕೂಡಾ ಅದೆ ರೀತಿ ನಿದ್ದೆ ಮಾಡಬೇಕಾದರೆ ಮೊಬೈಲ್ ನೋಡುತ ಮಲಗುತಾರೆ . ಅದೊಂದು ರೀತಿ ನಿದ್ದೆ ಟಾನಿಕ್ ಆಗಿದೆ . ಮೊಬೈಲ್ ನೋಡದೆ ನಿದ್ದೆ ಬರುವುದಿಲ್ಲ ಎನ್ನುವ ವಿಚಾರವನ್ನೆ ಇಟ್ಟುಕೊಂಡು ಮಲಗುವಾಗ ಮೊಬೈಲ್ ನೋಡಿಯೇ ಮಲಗುತ್ತಾರೆ . ಹಾಗಾಗಿ ಮಲಗುವ ಮೊದಲು ಮೊಬೈಲ್ ನೋಡಲೇ ಬೇಕು ಎನ್ನುವುದು ಅಲಿಖಿತ ನಿಯಮ ಅಗಿದೆ ಇಂದಿನ ಜೆನರೆಷನ್ ಅವರಿಗೆ . ಆದರೆ ಎನೆ ಅಲಿಖಿತ ನಿಯಮಗಳು ಇದ್ದರೂ ರಾತ್ರಿ ಮಲಗುವ ಮುನ್ನ ಮೊಬೈಲ್ ನೋಡಿಕೊಂಡು ನಿದ್ದೆ ಮಾಡುವ ಅಭ್ಯಾಸ ಖಂಡಿತಾ ಒಳ್ಳೆಯದು ಅಲ್ಲ ಇದರಿಂದ ಐದು ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ.

ಮಧ್ಯ ರಾತ್ರಿಯ ವರೆಗೆ ಮೊಬೈಲ್ ಫೋನ್ನಲ್ಲಿ ಚಲನಚಿತ್ರ, ಸಿರೀಯಲ್ಸ್ , ರೀಲ್ಸ್ ನೋಡುವ ಅಭ್ಯಾಸ ಅಥವಾ ಫೋನ್ ಅನ್ನು ಅತಿಯಾಗಿ ಬಳಸುವುದು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿ ಮಾಡುತ್ತದೆ. ಮೊಬೈಲ್ ಫೋನ್ಗಳ ಅತಿಯಾದ ಬಳಕೆಯಿಂದ ಉಂಟಾಗುವ 5 ಪ್ರಮುಖ ಆರೋಗ್ಯ ಹಾನಿಯ ಬಗ್ಗೆ ಮಾಹಿತಿ ಇಲ್ಲಿದೆ.

1). ಕಣ್ಣಿನ ಆಯಾಸ ಮತ್ತು ಬೆಳಕಿನ ಮೇಲೆ ಪರಿಣಾಮ
ಮೊಬೈಲ್ ಪರದೆಯ ನೀಲಿ ಬೆಳಕು ಕಣ್ಣುಗಳಿಗೆ ತುಂಬಾನೆ ಅಪಾಯಕಾರಿ. ರಾತ್ರಿಯಲ್ಲಿ ಕತ್ತಲೆಯಲ್ಲಿ ಫೋನ್ ನೋಡುವುದರಿಂದ ಕಣ್ಣಿಗೆ ಆಯಾಸ ಮತ್ತು ದೃಷ್ಟಿ ಸಮಸ್ಯೆ ಉಂಟಾಗುತ್ತದೆ.
2). ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ:-
ರಾತ್ರಿಯಲ್ಲಿ ಚಲನಚಿತ್ರ ಅಥವಾ ವೀಡಿಯೊಗಳನ್ನು ನೋಡುವುದು ನಿದ್ರೆಯ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತದೆ. ಮೊಬೈಲ್ಗಳಿಂದ ಹೊರಸೂಸುವ ನೀಲಿ ಬೆಳಕು ಮೆಲಟೋನಿನ್ ಹಾರ್ಮೋನ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಇದು ನಿದ್ರೆ ಬಾರದಂತೆ ತಡೆಯುತ್ತದೆ.

3). ಮಾನಸಿಕ ಒತ್ತಡ ಮತ್ತು ಆತಂಕ:-
ತುಂಬಾ ಹೊತ್ತು ಮೊಬೈಲ್ ಫೋನ್ ನಲ್ಲಿ ಕಳೆಯುವುದರಿಂದ ಮಾನಸಿಕ ಒತ್ತಡ ಮತ್ತು ಆತಂಕ ಹೆಚ್ಚುತ್ತದೆ. ಇದು ನಿಮ್ಮ ಮನಸ್ಥಿತಿಯನ್ನು ಹಾಳು ಮಾಡುತ್ತದೆ.

4). ಬೆನ್ನುಮೂಳೆ ಮತ್ತು ಕತ್ತಿನ ಸಮಸ್ಯೆಗಳು:-
ಮೊಬೈಲ್ ಫೋನ್ ಅನ್ನು ಹೆಚ್ಚು ಹೊತ್ತು ಬಾಗಿ ನೋಡುವುದರಿಂದ ಕುತ್ತಿಗೆ ಮತ್ತು ಬೆನ್ನುಮೂಳೆಯ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಇದು ಸ್ನಾಯು ಸೆಳೆತವನ್ನು ಜಾಸ್ತಿ ಮಾಡುತ್ತದೆ.
5). ಡಿಜಿಟಲ್ ಚಟ ಮತ್ತು ಸಾಮಾಜಿಕ ಅಂತರ :-
ಮೊಬೈಲ್ ಫೋನ್ಗಳ ಮೇಲಿನ ಅತಿಯಾದ ಅವಲಂಬನೆಯು ನಿಮ್ಮನ್ನು ಡಿಜಿಟಲ್ ಚಟಕ್ಕೆ ದೂಡಬಹುದು. ಇದು ನಿಮ್ಮ ಸಾಮಾಜಿಕ ಮತ್ತು ವೈಯಕ್ತಿಕ ಸಂಬಂಧಗಳ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು.
ಹಾಗಾದರೆ ಇದಕ್ಕೆ ಪರಿಹಾರ ನೋಡುವುದದರೆ..
ಪರಿಹಾರವೇನು?:
- ಮಲಗುವ ಮೊದಲು ಕನಿಷ್ಠ 1 ಗಂಟೆ ಮೊಬೈಲ್ ಬಳಸುವುದನ್ನು ನಿಲ್ಲಿಸಿ.
- ಪರದೆಯ ಸಮಯವನ್ನು ಮಿತಿಗೊಳಿಸಿ.
- ನೀಲಿ ಬೆಳಕಿನ ಫಿಲ್ಟರ್ ಬಳಸಿ.
- ದಿನದಲ್ಲಿ ನಿಮ್ಮ ಕಣ್ಣುಗಳಿಗೆ ವಿಶ್ರಾಂತಿ ನೀಡಲು ನಿಯಮಿತ ವಿರಾಮಗಳನ್ನು ತೆಗೆದುಕೊಳ್ಳಿ.
