Those born on these dates are the most intelligent ಈ ದಿನಾಂಕಗಳಂದು ಹುಟ್ಟಿದವರು ಅತಿ ಬುದ್ದಿವಂತರು ಬಿಂದಸ್ ಲೈಪ್ ಇವರದು!

Share to Your Friends

ಸಂಖ್ಯಾಶಾಸ್ತ್ರ

ಸಂಖ್ಯಾಶಾಸ್ತ್ರ ಮತ್ತು ಹಸ್ತಸಾಮುದ್ರಿಕ ಶಾಸ್ತ್ರವೂ ಒಂದು. ಸಂಖ್ಯೆಗಳು ನಮ್ಮ ಜೀವನದ ಎಲ್ಲ ವಿಷಯಗಳು ಜೀವನಕ್ಕೆ ಸಂಬಂಧವನ್ನು ಹೊಂದಿದೆ. ಅಲ್ಲದೆ, ಈ ಸಂಖ್ಯೆಗಳು ನೈಸರ್ಗಿಕವಾಗಿ ವಿಶ್ವದಲ್ಲಿ ವಿಶಿಷ್ಟ ಶಕ್ತಿಯನ್ನು ಹೊಂದಿರುತ್ತೆ, ಯಾರನ್ನ ಬೇಕಾದರು ಮೇಲಕ್ಕೇರಿಸಬಹುದು ಮತ್ತು ಕೆಳಗಿಳಿಸಬಹುದು.

ಸಂಖ್ಯಾಶಾಸ್ತ್ರವು ವ್ಯಕ್ತಿಯ ಹೆಸರು,  ಹುಟ್ಟಿದ ದಿನಾಂಕ, ತಿಂಗಳು, ಮತ್ತು ವರ್ಷದ ಆಧಾರದ ಮೇಲೆ ಅವರ ಭವಿಷ್ಯದ ಜೀವನ ಹೇಗಿರುತ್ತೆ ಎಂದು.ಈ ಸಂಖ್ಯಾಶಾಸ್ತ್ರವನ್ನು ರಾಡಿಕ್ಸ್‌ ಸಂಖ್ಯೆಗಳ ಆಧಾರದ ಮೇಲೆ ಹೇಳಲಾಗುತ್ತೆ. ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಮೊತ್ತವನ್ನು ರಾಡಿಕ್ಸ್ ಸಂಖ್ಯೆ ಅಥವಾ ಮೂಲಾಂಕ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಒಬ್ಬ 22ನೇ ತಾರೀಖಿನಂದು ಜನಿಸಿದರೆ ಆತನ ರಾಡಿಕ್ಸ್ ಸಂಖ್ಯೆ 2+2=4 ಆಗಿರುತ್ತದೆ.
ರಾಶಿಗಳಂತೆ ರಾಡಿಕ್ಸ್ ಸಂಖ್ಯೆಗಳು ಕೂಡ ಗ್ರಹಗಳೊಂದಿಗೆ ಸಂಬಂಧ ಹೊಂದಿವೆ. ಸಂಖ್ಯಾಶಾಸ್ತ್ರದಲ್ಲಿ 01 ರಿಂದ 09ರವರೆಗಿನ ಸಂಖ್ಯೆಗಳನ್ನು ರಾಡಿಕ್ಸ್ ಸಂಖ್ಯೆಗಳು ಎಂದು ಹೇಳಲಾಗುತ್ತದೆ. ಈ 9 ರಾಡಿಕ್ಸ್ ಸಂಖ್ಯೆಗಳು ಕೂಡ ನವಗ್ರಹಗಳಲ್ಲಿ ಒಂದೊಂದು ಗ್ರಹಗಳಿಗೆ ಸೀಮಿತವಾಗಿವೆ

ಯಾವುದೇ ತಿಂಗಳ 2, 11, 20 ಮತ್ತು 29ನೇ ತಾರೀಖಿನಂದು ಹುಟ್ಟಿದವರು ಅದೃಷ್ಟ ಸಂಖ್ಯೆ ಅಂದರೆ ರಾಡಿಕ್ಸ್ ಸಂಖ್ಯೆ 2 ಆಗಿರುತ್ತದೆ. ಈ ಸಂಖ್ಯೆಗಳಲ್ಲಿ ಜನಿಸಿದವರ ವಿಶೇಷವಾದ ಗುಣದವರು, ಭವಿಷ್ಯದ ಜೀವನ ಮತ್ತು ನೆಗೆಟಿವ್ ಗುಣಗಳು ಏನು ಎಂಬುದನ್ನು  ತಿಳಿದುಕೊಳ್ಳೋಣ.

ವಿಶೇಷ ಗುಣಗಳು

2ನೇ ಸಂಖ್ಯೆಯಲ್ಲಿ ಜನಿಸಿದ ಜನರು ಚಂದ್ರನಿಂದ ಆಳಲ್ಪಡುವುವರು, ಇವರು ಸ್ವಾಭಾವಿಕವಾಗಿ ಆಕರ್ಷಕ ಮತ್ತು ಕಾಂತೀಯ ಕಣ್ಣುಗಳನ್ನು ಹೊಂದಿರುತ್ತಾರೆ. ಸ್ವಭಾವತಃ ಸೌಮ್ಯರು ಮತ್ತು ಸಭ್ಯರು. ಅವರ ಹೆಚ್ಚಿನ ಬುದ್ಧಿವಂತಿಕೆಯೇ ಯಶಸ್ಸಿಗೆ ಪ್ರಮುಖ ಕಾರಣವಾಗಿರುತ್ತದೆ. ಮೆದುಳಿನ ಶ್ರಮ ಅಗತ್ಯವಿರುವ ಎಲ್ಲ ಕ್ಷೇತ್ರಗಳಲ್ಲಿ ಅವರು ಸುಲಭವಾಗಿ ಯಶಸ್ವಿಯಾಗುತ್ತಾರೆ. ಹೊಸ ಆವಿಷ್ಕಾರಗಳನ್ನು ರಚಿಸುವಲ್ಲಿ ಸದಾ ಮುಂದಿರುತ್ತಾರೆ. 2ನೇ ಸಂಖ್ಯೆಯಲ್ಲಿ ಜನಿಸಿದ ಜನರು

ತಮ್ಮ ಬುದ್ದಿವಂತಿಕೆಯಿಂದಾಗಿ ಸಮಾಜದಲ್ಲಿ ಇತರರಿಗಿಂತ ಹೆಚ್ಚಿನ ಗೌರವವನ್ನು ಪಡೆಯುತ್ತಾರೆ. ಯಾವುದೇ ಪರಿಸ್ಥಿತಿಗೆ ತಕ್ಷಣ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.

ನಕಾರಾತ್ಮಕ ಗುಣಗಳು

2ನೇ ಸಂಖೆಯಲ್ಲಿ ಹುಟ್ಟಿದ ಜನರು ಕೆಲವು ನಕಾರಾತ್ಮಕ ಗುಣಗಳು ಸಹ ಇರುತ್ತವೆ. ಸ್ವಾಭಾವಿಕವಾಗಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಕಡಿಮೆ ಇರುವುದರಿಂದ, ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಗಂಭೀರ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಈ ಸಂಖ್ಯೆಗಳಲ್ಲಿ ಜನಿಸಿದ ಜನರು ಯಾವುದೇ ವಿಷಯವನ್ನು ಆಯ್ಕೆಮಾಡುವಾಗ ಸಾಕಷ್ಟು ಗೊಂದಲಗಳನ್ನು ಎದುರಿಸುತ್ತಾರೆ. ಹೆಚ್ಚು ಬುದ್ದಿವಂತರಾಗಿದ್ದರೂ, ಅವರಲ್ಲಿ ಸ್ವಲ್ಪ ಕಡಿಮೆ ಆತ್ಮವಿಶ್ವಾಸವಿರುತ್ತದೆ.

Leave a Reply

Your email address will not be published. Required fields are marked *